Karnataka Rashana Vedike
Kuvempu
ico_adhyaksharalEkhaniyinda3.jpg
kvrblog.jpg
Sangatane.jpg

ಬೆಳಗಾವಿ ಪಾಲಿಕೆ ಕನ್ನಡಿಗರ ತೆಕ್ಕೆಗೆ; ಕರವೇ ಶ್ರಮಕ್ಕೆ ಸಂದ ಪ್ರತಿಫಲ

ಕ.ರ.ವೇ ಹೋರಾಟಗಳು
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಮ್.ಈ.ಎಸ್) ಮಹಾನಗರ ಪಾಲಿಕೆಯ ಅಧಿಕಾರದಲ್ಲಿದ್ದ ಕಾಲದಲ್ಲಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹುನ್ನಾರ ನಡೆಸುತ್ತಿತ್ತು ಹಾಗೆಯೇ, ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿತ್ತು. ಇದನ್ನು ಮನಗಂಡ ಕರ್ನಾಟಕ ರಕ್ಷಣಾ ವೇದಿಕೆ ಎಮ್.ಈ.ಎಸ್ ವಿರುದ್ಧ ಸಮರ ಸಾರಿತ್ತು

೨೦೦೫ ರಲ್ಲಿ ಕನ್ನಡ ವಿರೋಧಿ ಧೋರಣೆ ತೋರುತ್ತಿದ್ದ ಬೆಳಗಾವಿಯ ಮಹಾಪೌರರಾಗಿದ್ದ ವಿಜಯ ಮೋರೆ, ಕರ್ನಾಟಕ ಸರ್ಕಾರದಿಂದ ಅನುದಾನ ಪಡೆಯಲು ಬೆಂಗಳೂರಿಗೆ ಬಂದಿದ್ದರು. ಆಗ ವಿಜಯ್ ಮೋರೆಗೆ ಮಸಿಬಳೆದು ಎಮ್.ಈ.ಎಸ್ ವಿರುದ್ಧ ಐತಿಹಾಸಿಕ ಹೋರಾಟಕ್ಕೆ ನಾಂದಿ ಹಾಡಿದೆವು.

  • ಬೆಳಗಾವಿ ಜಿಲ್ಲೆಯಾದ್ಯಂತ, ಹಳ್ಳಿಯಿಂದ ಹಿಡಿದು ಜಿಲ್ಲೆಯವರೆಗೂ ಸಾವಿರಾರು ಶಾಖೆಗಳನ್ನು ತೆರೆದು; ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದೆವು.
  • ಬೆಳಗಾವಿಯಲ್ಲಿ ಪ್ರಕ್ಯಾತ ಗಾಯಕ ಸಿ. ಅಶ್ವತ್ ರವರಿಂದ ಕನ್ನಡವೇ ಸತ್ಯ ಕಾರ್ಯಕ್ರಮ ನಡೆಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದೆವು.
  • ಸಂಘಟನೆಯ ಮೂಲಕ, ಪಾಲಿಕೆ ಚುಣಾವಣೆಗಳಲ್ಲಿ ಕನ್ನಡದ ಅಭ್ಯರ್ತಿಗಳನ್ನೇ ಗೆಲ್ಲಿಸುವಂತೆ ಕನ್ನಡಿಗರಲ್ಲಿ ಕರೆ ನೀಡಿದೆವು.
  • ಎರಡು ಭಾರಿ ಸಾವಿರಾರು ಸಂಖ್ಯೆಯಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಬಂದು, ಆಗಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರಲ್ಲಿ, ಬೆಳಗಾವಿಗೆ ಅಭಿವೃದ್ದಿಗೆ ವಿಶೇಷ ಒತ್ತು ನೀಡುವಂತೆ ಮನವಿ ಮಾಡಿಕೊಂಡಿದ್ದೆವು.
  • ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಶಾಧಿವೇಶಣ ಹಾಗು ವಿಧಾನ ಸೌಧ ಶಂಖು ಸ್ಥಾಪನೆಗೆ ಕಾರಣವಾಯಿತು.

ಇವೆಲ್ಲದರ ಪರಿಣಾಮವಾಗಿ ಪಾಲಿಕೆ ಚುಣಾವಣೆಯಲ್ಲಿ ಕನ್ನಡಿಗರು ಮೇಲುಗೈ ಸಾಧಿಸಿದರು. ಮಹಾನಗರ ಪಾಲಿಕೆಯ ೫೭ ಸ್ತಾನಗಳಲ್ಲಿ ೨೮ ಸ್ಥಾನಗಳನ್ನು ಕನ್ನಡದ ಅಭ್ಯರ್ತಿಗಳು ಗೆದ್ದುಕೊಂಡರು.

ಮರ್ಚ್ ೪ ೨೦೦೮ ರಂದು ನಡೆದ ಮಹಾಪೌರರ ಆಯ್ಕೆಯಲ್ಲಿ ನಮ್ಮ ಬೆಂಬಲಿತ ಕನ್ನಡಿಗರೇ ಮಾಹಾಪೌರರಾದರು. ೧೭ ವರುಷಗಳಲ್ಲಿ ಇದೇ ಮೊದಲನೇ ಭಾರಿಗೆ ಕನ್ನಡದ ಅಭ್ಯರ್ಥಿ ಮಹಾಪೌರರಾದದ್ದು. ಇದು ಕರ್ನಾಟಕ ರಕ್ಷಣಾ ವೇದಿಕೆಯ, ಕನ್ನಡಿಗರ ಮತ್ತು ಕರ್ನಾಟಕದ ಐತಿಹಾಸಿಕ ಗೆಲುವು.


 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ