ಕರ್ನಾಟಕದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ.

ಕನ್ನಡ, ಕರ್ನಾಟಕದ ಅಭಿವೃದ್ಧಿಯೆಂದರೆ ಕನ್ನಡಿಗರ ಅಭಿೃದ್ಧಿಯೆಂದೇ. ಇದಕ್ಕಾಗಿ ಯಾವ ರಾಜಿಯಿಲ್ಲದೆ ನಾವು ಶ್ರಮಿಸುತ್ತೇವೆ.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.

ಕರ್ನಾಟಕದಲ್ಲಿ ಎಲ್ಲ ರಂಗಗಳಲ್ಲೂ ಕನ್ನಡಿಗನೇ ಸಾರ್ವಭೌಮ, ಕನ್ನಡಿಗರಿಗೇ ಮೊದಲ ಆದ್ಯತೆ.

ನಮ್ಮ ಗಡಿ, ನಮ್ಮ ಸಂಪತ್ತು.

ನಮ್ಮ ಗಡಿಗಳು ಕನ್ನಡಿಗರೆಲ್ಲರ ಸ್ವತ್ತು. ಗಡಿ ರಕ್ಷಣೆಗಾಗಿ ಯಾವ ತ್ಯಾಗಕ್ಕೂ ನಾವು ಸಿದ್ಧ.

ಬೆಳಗಾವಿ ನಮ್ಮದೇ. ಎಂದೆಂದಿಗೂ.

ನಮ್ಮ ಬೆಳಗಾವಿ ಚೆನ್ನಮ್ಮನ ನಾಡು, ರಾಯಣ್ಣನ ನೆಲೆಯೂಡು. ಅದನ್ನು ಕಬಳಿಸಲು ಯಾರಿಗೂ ಹಕ್ಕಿಲ್ಲ.

ನಾನು ಕನ್ನಡಿಗ. ನನಗೆ ಅದು ಬಲು ಹೆಮ್ಮೆ.

ನಾನು ಕನ್ನಡಿಗನೆಂದು ಎಲ್ಲಿಯಾದರು ಎದೆಯುಬ್ಬಿಸಿ ಹೇಳುವ ಧೈರ್ಯವಿರುವುದು ಕನ್ನಡಿಗರಿಗೆ ಮಾತ್ರ.

ಕರ್ನಾಟಕದಲ್ಲಿ ಕನ್ನಡಿಗನೇ ದೊರೆ.

ನಿರಭಿಮಾನಿ ಕನ್ನಡಿಗರ ಪೊರೆ ಕಳಚೋಣ. ಕರ್ನಾಟಕದಲ್ಲಿ ಕನ್ನಡಿಗನೇ ದೊರೆ ಎಂದು ಸಾರೋಣ.

ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ.

ಒಕ್ಕೂಟದಲ್ಲಿ ಸಮಾನ ಭಾಷಾ ಮಾನ್ಯತೆ ನಮ್ಮ ಹಕ್ಕು.

ಕನ್ನಡಿಗರ ನಾಡು ಸ್ವಾಭಿಮಾನದ ಬೀಡು.

ಬನ್ನಿ, ಕಟ್ಟೋಣ ಕನ್ನಡಿಗರ ಸ್ಭಾಭಿಮಾನದ ಬೀಡೊಂದನು.

ಕರ್ನಾಟಕದಲ್ಲಿನ ಆಡಳಿತ ವ್ಯವಸ್ಥೆ ಕನ್ನಡಿಗರಿಗೋಸ್ಕರವೇ.

ಕನ್ನಡಿಗನೊಬ್ಬ ಕರ್ನಾಟಕದಲ್ಲಿ ಬದುಕಲು ಬೇಕಾಡ ಎಲ್ಲ ಆಡಳಿತ ವ್ಯವಸ್ಥೆ ಕನ್ನಡದಲ್ಲೇ ಇರಬೇಕು. ಅದು ನಮ್ಮ ಹಕ್ಕು.

ಕರವೇ ಐ.ಟಿ. ಘಟಕದಿಂದ ಮಾರ್ಚ್ ನಲ್ಲಿ ಉದ್ಯೋಗ ಮಾರ್ಗದರ್ಶನ ಶಿಬಿರ - ಐ.ಟಿ. ಕ್ಷೇತ್ರ

ಬನ್ನಿ, ಐ.ಟಿ. ಕನ್ನಡಿಗರೆಲ್ಲರೂ ಒಂದಾಗೋಣ... ಕನ್ನಡ-ಕನ್ನಡಿಗ-ಕರ್ನಾಟಕದ ಅಭಿವೃದ್ಧಿಗೆ ಕೈಜೋಡಿಸೋಣ.

 

ಕರವೇ ಐ.ಟಿ. ಘಟಕದಿಂದ ಮಾರ್ಚ್ ನಲ್ಲಿ “ಉದ್ಯೋಗ ಮಾರ್ಗದರ್ಶನ ಶಿಬಿರ – ಐ.ಟಿ. ಕ್ಷೇತ್ರ”

1_Mar_1

ಐಟಿ ಕ್ಷೇತ್ರದಲ್ಲಿ ಉದ್ಯೋಗ ಅರಸುತ್ತಿರುವ ಕನ್ನಡಿಗ ಅಭ್ಯರ್ಥಿಗಳಿಗೆ ನೆರವಾಗಲು “ಕರ್ನಾಟಕ ರಕ್ಷಣಾ ವೇದಿಕೆಯ – ಐಟಿ ಘಟಕದ” ವತಿಯಿಂದ ಉಚಿತ ಉದ್ಯೋಗ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಗಿದ್ದು, ಶಿಬಿರದಲ್ಲಿ ಪಾಲ್ಗೊಳ್ಳಲು ಈ ನೋಂದಾವಣಿ ಪತ್ರವನ್ನು ತುಂಬಿ ಕಳುಹಿಸಬೇಕು. http://tinyurl.com/nn7ryne

ವಿಜಯಪುರ ಜಿಲ್ಲೆಯ ಬಸವಬಾಗೇವಾಡಿ ತಾಲೂಕಿನ ಹುಣಶ್ಯಾಳ, ಬ್ಯಾಕೋಡ ಮತ್ತು ಹೂವಿನಹಿಪ್ಪರಗಿ ಗ್ರಾಮ ಪಂಚಾಯತಿಗಳಲ್ಲಿ ನಡೆದಿರುವ ಅವ್ಯವಹಾರ ಸರಿಪಡಿಸಲು ಅಗ್ರಹಿಸಿ ಪ್ರತಿಭಟನೆ

27_Feb_1

ವಿಜಯಪುರ ಜಿಲ್ಲೆಯ ಬಸವಬಾಗೇವಾಡಿ ತಾಲೂಕಿನ ಹುಣಶ್ಯಾಳ, ಬ್ಯಾಕೋಡ ಮತ್ತು ಹೂವಿನಹಿಪ್ಪರಗಿ ಗ್ರಾಮ ಪಂಚಾಯತಿಗಳಲ್ಲಿ ನಡೆದಿರುವ ಅವ್ಯವಹಾರವನ್ನು ಸರಿಪಡಿಸುವಂತೆ ಒತ್ತಾಯಿಸಿ ನಮ್ಮ ಕಾರ್ಯಕರ್ತರು ಪ್ರತಿಭಟಿಸಿದರು. ಅದರ ಚಿತ್ರಗಳು ಇಲ್ಲಿವೆ

ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಸಾಂಕೇತಿಕ ಪ್ರತಿಭಟನೆ

25_Feb_1

ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಚಿತ್ರಗಳು:

ಗದಗ ಜಿಲ್ಲೆಯ ಶಿರಹಟ್ಟಿಯ ಗೊಜನೂರು ಗ್ರಾಮ ಪಂಚಾಯತಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ನಡೆಲು ಆಗ್ರಹಿಸಿ ಪ್ರತಿಭಟನೆ

24_Feb_1

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಗೊಜನೂರು ಗ್ರಾಮ ಪಂಚಾಯತಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ನಾವು ನಡೆಸಿದ ಪ್ರತಿಭಟನೆಯ ಚಿತ್ರಗಳು

ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣಕ್ಕೆ ಆಗ್ರಹಿಸಿ ಕರವೇಯಿಂದ ಲಕ್ಷಾಂತರ ಕನ್ನಡಿಗರ ಸಹಿ ಸಂಗ್ರಹ

23_Feb_1

ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಕನ್ನಡದಲ್ಲೇ ಸಿಗಬೇಕೆಂದು ಸಾಂವಿಧಾನಿಕ ತಿದ್ದುಪಡಿ ತರುವಂತೆ ಒತ್ತಾಯಿಸಿ ಸಹಿ ಸಂಗ್ರಹವನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯವ್ಯಾಪಿ ಮಾಡಿದೆ. ಈ ಅಭಿಯಾನದಲ್ಲಿ ಲಕ್ಷಾಂತರ ಜನರು ಸಹಿಯನ್ನು ಹಾಕಿ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಿರಿಯ ಸಾಹಿತಿಗಳಾದ ಚಂದ್ರಶೇಖರ ಕಂಬಾರ ಹಾಗು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ

ಕರವೇ ಯಿಂದ ನಾಡಿನ ಜನತೆಗೆ “ವಿಶ್ವ ತಾಯ್ನುಡಿ ದಿನ” ದ ಶುಭಾಶಯಗಳು

Slide3

ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿ “ವಿಶ್ವ ತಾಯ್ನುಡಿ ದಿನ”ದ ಶುಭಾಶಯಗಳು. ಬನ್ನಿ, ಎಲ್ಲ ಕನ್ನಡಿಗರೂ ನಮ್ಮ ತಾಯ್ನುಡಿಯಾದ ಕನ್ನಡವನ್ನು ಎಲ್ಲೆಡೆ, ಎಲ್ಲ ರಂಗಗಳನ್ನೂ ಮೆರೆಸೋಣ.

ಚಿಕ್ಕಮಗಳೂರು ಜಿಲ್ಲೆಯ ಕಲ್ಲು ಕ್ವಾರಿಗಳಲ್ಲಿ ಭಾರೀ ಪ್ರಮಾಣದ ಸ್ಫೋಟಕದ ಬಳಕೆಯ ಮೂಲಕ ನಡೆಯುತ್ತಿರುವ ಅಕ್ರಮ ವಿರೋಧಿಸಿ ಡಿ.ಸಿ. ಕಚೇರಿ ಎದುರು ಪ್ರತಿಭಟನೆ

20_Feb_2

ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಬಳಸಿ ಕಲ್ಲು ಕ್ವಾರಿಗಳಲ್ಲಿ ಅಕ್ರಮ ನಡೆಸುತ್ತಿರುವುದನ್ನು ಖಂಡಿಸಿ ಚಿಕ್ಕಮಗಳೂರು ಡಿ.ಸಿ ಕಚೇರಿಯ ಎದುರು ನಮ್ಮ ಕಾರ್ಯಕರ್ತರು ಪ್ರತಿಭಟಿಸಿದರು.ಅದರ ಚಿತ್ರಗಳು ಇಲ್ಲಿವೆ:

ಕೋಲಾರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಘಟಕದಿಂದ ಪ್ರತಿಭಟನೆ

19_Feb_2_1

ಬೇಸಿಗೆ ಶುರುವಾಗುತ್ತಿದ್ದಂತೆ ಕೋಲಾರ ಜಿಲ್ಲೆಯಲ್ಲಿ ನೀರಿನ ಅಭಾವ ಅತಿಯಾಗುತ್ತದೆ. ಈ ನಿಟ್ಟಿನಲ್ಲಿ ಕೋಲಾರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಕರ್ನಾಟಕ ರಕ್ಷಣಾ ವೇದಿಕೆಯ ಕೋಲಾರ ಜಿಲ್ಲಾ ಘಟಕದ ವತಿಯಿಂದ ಭೇಟಿ ಮಾಡಿ ಜಿಲ್ಲೆಯಾದ್ಯಂತ ಸಮರ್ಕಪಕವಾಗಿ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಲಾಯಿತು.

ಬೆಂಗಳೂರು ನಗರದ ಯಲಹಂಕ ವಿಧಾನಸಭೆ ಕ್ಷೇತ್ರದಲ್ಲಿ ಕರವೇ ಯಿಂದ ಕನ್ನಡದ ಹಬ್ಬ

19_Feb_1

ಬೆಂಗಳೂರು ನಗರದ ಯಲಹಂಕ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಕನ್ನಡದ ಹಬ್ಬ ಕಾರ್ಯಕ್ರಮದ ಚಿತ್ರಗಳು:

ಚಿಕ್ಕಮಗಳೂರು ಜಿಲ್ಲೆಯ ಸತ್ತಿಹಳ್ಳಿಯ ಬಡ ಕಾರ್ಮಿಕರಿಗೆ ಕುಡಿಯುವ ನೀರು, ವಿದ್ಯುತ್ ಮತ್ತು ನಿವೇಶನ ಸೌಕರ್ಯಗಳನ್ನು ಒದಗಿಸಲು ಒತ್ತಾಯಿಸಿ ಪ್ರತಿಭಟನೆ

18_Feb_2_1

ಕುಡಿಯುವ ನೀರು ಮತ್ತು ವಿದ್ಯುತ್ ಸರಬರಾಜನ್ನು ಸಮರ್ಪಕವಾಗಿ ಮಾಡಿ ಬಡ ಕಾರ್ಮಿಕರಿಗೆ ನಿವೇಶನಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಸತ್ತಿಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಅರಸ್ ಅವರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟಿಸಿದರು.